ಕನಸಿನ ಕೊಳದಲಿ... ಮುಳುಗಲು ಕಲಿ
ನೆನಪಿನ ಸರೋವರದಲಿ ...ಮೀಯಲು ಕಲಿ
ಪ್ರೇಮದ ಕಾರಂಜಿಯಲಿ....ಚಿಮ್ಮಲು ಕಲಿ
ಸ್ನೇಹದ ನದಿಯಲಿ... ಹರಿಯಲು ಕಲಿ
ಆಸೆಯ ಸಾಗರವನು ... ದಾಟಲು ಕಲಿ
ದುಃಖದ ಕಂಬನಿಯನು ... ತೊರೆಯಲು ಕಲಿ
ಸಂತಸದ ಸೋನೆಯನು... ಸವಿಯಲು ಕಲಿ
ಕರುಣೆಯ ಮಳೆಯನು...ಸುರಿಸಲು ಕಲಿ
..........
ಓ ಮನಸೇ ಈ ಬದುಕಲಿ ಈಜಲು ಕಲಿ!