ದೂದ್ ಪೇಡ ಲೈಫು ಇಷ್ಟೇನೆ ಅಂತಿದ್ರೆ ಹೌದು ಹೌದು ಅನ್ಬೇಕು ಅನ್ಸತ್ತೆ :) ...ಅಚ್ಚುಕಟ್ಟಾಗಿ ಮಾಡಿರೋ ಪಿಚ್ಚರ್ರು ಇದು !
ದೂದ್ ಪೇಡ ನನ್ನ ಆಲ್ ಟೈಮ್ favourite ಆಗೋ ಎಲ್ಲ ಲಕ್ಷಣಗಳು ಕಾಣಿಸ್ತಿವೆ ...ದಿಗಂತ್ ಮತ್ತು ಶಿವು ಮಧ್ಯ ನಡೆಯೋ conversations ಸಕತ್ತಾಗಿದೆ .....ದಿಗಂತ್ ಮುಂದೆ complan ಗರ್ಲ್ ಉದ್ದ ಕಾಣೋದು ಮಜಾ ಕೊಡತ್ತೆ :) ....ದಿಗಂತ್ ಅಮ್ಮ / ಅಪ್ಪ ಸಕತ್ ಕೂಲ್ ಅನ್ಸ್ತಾರೆ...ಈ ನಡವೆ ಯಾಕೋ ಎಲ್ಲ ಪಿಕ್ಚರ್ ಅಲ್ಲೂ parents ಸಕತ್ ಕೂಲ್ ಕೂಲ್ :)
ಸುದೀಪ್ ಸೀರಿಯಸ್ ಆಗಿ ತೆಗ್ದಿರೋ My Autograph ಕಥೆ ಇದ್ರಲ್ಲಿ ಬೇರೆ ಥರ ಹೇಳಿದ್ದಾರೆ , Autograph ಅಳ್ಸದ್ರೆ ಇಲ್ಲಿ ನಮ್ಮನ್ನ ನಾವೇ ಎಷ್ಟೊಂದ್ ಕಡೆ ಕಂಡ್ಕೊಂಡು ನಗಬೇಕಾಗತ್ತೆ ...
ಹಾಡ್ಗಳಲ್ಲಿ...Junior ದೇವದಾಸ ಇಷ್ಟ ಆಗತ್ತೆ ...
ಹುಡುಗ್ರಿಗೆ 4 - 5 ಜನ girl friends ಕೈ ಕೊಡೋದು..humorous ಆಗೇ ತೋರ್ಸ್ತಾರೆ ..ಇದೆ ಕಥೆ ಹುಡ್ಗೀರ್ ಕಡೆ ಇಂದ ತೆಗ್ದಿದ್ರೆ ಯಾಕ ಗೋಳ್ ಕಥೆ ಮಾಡ್ತಾರೋ ಗೊತ್ತಿಲ್ಲ... ಎಲ್ಲಾರ್ ಲೈಫು ಇಷ್ಟೇನೆ ಅಲ್ವಾ!!